Ondu Munjane Song Lyrics -Yajamana Movie

Song Details :

  • Song Name: OnduMunjane
  • Lyrics: Kaviraj
  • Singers: Sonu Nigam & Shreya Ghoshal
  • Music Director: V Harikrishna
  • Direction: V Harikrishna, P. Kumar
Also Read :

Ondu Mujane Song Lyrics

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೇ
ನನ್ನ ತಾರೆ ನಿನ್ನ ಮೇಲೆ
ಗೋಲಿ ಆಡ್ತಿದ್ದ ವಯಸ್ಸಲ್ಲೇ ಪ್ರೀತಿ
ಶುರುವಾಗೋಯ್ತೆ
ನೀ ಕಾಣೋ ಎಲ್ಲ ಕನಸ
ಮಾಡುವೆನು ನಾನು ನನಸ
ದಾಸ ನಿನಗೆ ಖಾಸ
ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೇ
ಯಾರಿಲ್ಲದ ಊರಲ್ಲಿ ಒಂದು ನದಿ ದಂಡೇಲಿ
ನಾವೊಂದು ಪುಟ್ಟ ಮನೆ ಮಾಡಿ
ಬೆಳದಿಂಗಳ ರಾತ್ರೀಲಿ ನಕ್ಷತ್ರದ ಹೊದಿಕೇಲಿ
ನಾನಿರುವೆ ನಿನ್ನ ಮಡಿಲಲ್ಲಿ
ನಿನಗೆ ನಾನು, ನನಗೆ ನೀನು
ನನ್ನ ಜಗದ ದೊರೆಯು ನೀನು
ರಾಣಿ. ಬಾರೆ
ನೀನಿರದೇ ಒಂದು ನಿಮಿಷ
ಇರಲಾರ ನಿನ್ನ ಅರಸ
ದಾಸ ನಿನಗೆ ಖಾಸ
ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೇ
ಸಿಹಿಮುತ್ತಿನ ಕಂದಾಯ
ಪ್ರತಿನಿತ್ಯವೂ ಸಂದಾಯ
ಮಾಡೋದು ಮರಿಬೇಡ ಇಂದು
ಒಂದೇ ಕಣೆ ಒತ್ತಾಯ
ನಿನಗೆ ಹಣೆ ಬಿಂದಿಯ
ದಿನ ನಿತ್ಯ ಇಡೋ ಕೆಲಸ ನಂದು
ನನದೆ ಕಣ್ಣು ತಗಲೋ ಭಯವೇ
ಕಣ್ಣು ಮುಚ್ಚು ಅಲ್ಲೂ ಸಿಗುವೆ
ರಾಣಿ… ಬಾರೆ
ಕಾವೇರಿ ಕಾಯೋ ಕೆಲಸ ಮಾಡುವೆನು ಎಲ್ಲದಿವಸ
ದಾಸ ನಿನಗೆ ಖಾಸ
Also, Read: